WELCOME TO SS CONSUMER PRODUCTS
Our products are from nature, for nature. Yes, we are trying to raise awareness about plastic waste and plastic products. This plastic waste never degrades and, when buried in landfills, it pollutes our land, lakes, oceans, and rivers. It also harms the lives of living organisms on land and in water. Plastic pollution consists of plastic materials and particles (e.g., plastic cups, bottles, bags, and microbeads) accumulating in Earth's environment, negatively impacting humans, wildlife, and their habitats.
Recent research shows that due to factors like mechanical fishing, over 100 million pounds of plastic enter the ocean. To combat this environmental pollution, we are committed to providing you with a product for your daily needs that is 100% biodegradable and compostable within 45 to 60 days. This product is called "Bagasse," which is made from the fibers of sugarcane leftover after extracting its juice. Instead of discarding or burning the sugarcane stalks, a paper-like material is produced from it. The product made from this material is our Bagasse cup. Use our Bagasse cup and contribute to protecting the environment. Let environmental protection be our shared goal. Use the Bagasse cup and safeguard nature.
ABOUT
ABOUT US
ಎಸ್ ಎಸ್ ಗ್ರಾಹಕ ಉತ್ಪನ್ನಗಳಿಗೆ ಸ್ವಾಗತ
ನಮ್ಮ ಉತ್ಪನ್ನಗಳು ಪ್ರಕೃತಿ ಇಂದ ಪ್ರಕೃತಿಗೆ. ಹೌದು, ನಾವು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಈ ಪ್ಲಾಸ್ಟಿಕ್ ತ್ಯಾಜ್ಯ ಎಂದಿಗೂ ನಾಶವಾಗುವುದಿಲ್ಲ. ಮತ್ತು ಲ್ಯಾಂಡ್ ಫಿಲ್ಲಿಂಗ್ ಗಳಲ್ಲಿ ಅಡಗಿಕೊಂಡು ನಮ್ಮ ಭೂಮಿ, ಕೆರೆಗಳು ,ಸಾಗರಗಳು ಹಾಗೂ ನದಿಗಳನ್ನು ಮಾಲಿನ್ಯಗೊಳಿಸುತ್ತಿದೆ. ಹಾಗೆಯೇ ಭೂಮಿಯಲ್ಲಿ, ನೀರಿನಲ್ಲಿ ವಾಸಿಸುವ ಜೀವಿಗಳ ಜೀವಕ್ಕೆ ಹಾನಿ ಉಂಟು ಮಾಡುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯವು ಭೂಮಿಯ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು( ಉದಾ: ಪ್ಲಾಸ್ಟಿಕ್ ಲೋಟ ,ಬಾಟಲಿಗಳು, ಚೀಲಗಳು ಮತ್ತು ಮೈಕ್ರೋ ಬೀಡ್ ಗಳು)ಶೇಖರಣೆಯಾಗಿದ್ದು ಅದು ಮಾನವರು ,ವನ್ಯಜೀವಿಗಳು ಮತ್ತು ಅವುಗಳ ಆವಾಸ ಸ್ಥಾನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಇತ್ತೀಚಿನ ಸಂಶೋಧನೆಯು ಯಾಂತ್ರಿಕ ಮೀನುಗಾರಿಕೆ ಮುಂತಾದ ಕಾರಣಗಳಿಂದ 100 ಮಿಲಿಯನ್ ಪೌಂಡ್ ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಸಾಗರ ಸೇರುತ್ತಿದೆ. ಈ ಪರಿಸರ ಮಾಲಿನ್ಯವನ್ನು ತಡೆಯಲು ನಾವು 100% ಮಣ್ಣಿನಲ್ಲಿ ಕರಗುವ 45 ರಿಂದ 60 ದಿನಗಳ ಒಳಗೆ ಮಣ್ಣಿನೊಂದಿಗೆ ಬೆರೆತು ಗೊಬ್ಬರವಾಗುವ ಉತ್ಪನ್ನವನ್ನು ನಿಮ್ಮ ದೈನಂದಿನ ಅಗತ್ಯಗಳಿಗೆ ಪೂರೈಸಲು ಮುಂದಾಗಿದ್ದೇವೆ. ಈ ಉತ್ಪನ್ನವನ್ನು ಬಗಾಸೇ ಎಂದು ಕರೆಯಲಾಗುತ್ತದೆ. ಇದು ಕಬ್ಬಿನ ರಸವನ್ನು ಹೊರ ತೆಗೆದ ನಂತರ ಉಳಿಯುವ ಕಬ್ಬಿನ ನಾರಿನಿಂದ ತಯಾರಿಸಲಾಗುತ್ತದೆ. ಕಬ್ಬಿನ ಕಾಂಡದ ತಿರುಳನ್ನು ಎಸೆಯುವ ಅಥವಾ ಸುಡುವ ಬದಲು ಅದರಿಂದ ಕಾಗದದಂತಹ ವಸ್ತುವನ್ನು ತಯಾರಿಸಲಾಗುತ್ತದೆ. ಆ ಕಾಗದದ ಉತ್ಪನ್ನ ದಿಂದ ತಯಾರಾದ ವಸ್ತುವೇ ನಮ್ಮ ಬಗಾಸೆ ಕಪ್. ನಮ್ಮ ಬಗಾಸೆ ಕಪ್ ಅನ್ನು ಉಪಯೋಗಿಸಿ ಪರಿಸರ ರಕ್ಷಣೆಗೆ ಮುಂದಾಗಿ. ಪರಿಸರ ರಕ್ಷಣೆಯೇ ನಮ್ಮೆಲ್ಲರ ಮುಂದಿನ ಗುರಿಯಾಗಲಿ.ಬಗಾಸೆ ( Bagasee )ಕಪ್ ಬಳಸಿ ಪರಿಸರವನ್ನು ರಕ್ಷಿಸಿ.